ನಮ್ಮ ಹೊಸ ವೆಬ್‌ಸೈಟ್ ಅನ್ನು ಇನ್ನಷ್ಟು ಉತ್ತಮಪಡಿಸಲು, ನಿಮ್ಮ ಸಲಹೆಗಳು ನಮಗೆ ಬಹಳ ಮುಖ್ಯ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಇಲ್ಲಿ ಹಂಚಿಕೊಳ್ಳಿ

Karnataka_Tourism
|ಲಾಗಿನ್ ಮಾಡಿ
Karnataka_Tourism_Logo

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

X (Twitter)

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

ನಮ್ಮನ್ನು ಸಂಪರ್ಕಿಸಿ

ಮುಖ್ಯ ಕಚೇರಿ ವಿಳಾಸ: ಕಮಿಷನರ್ ಕಚೇರಿ

ಪ್ರವಾಸೋದ್ಯಮ ಇಲಾಖೆ 5ನೇ ಮಹಡಿ, ಇಂಧನ ಭವನ, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560 009, ಕರ್ನಾಟಕ, ಭಾರತ

☎ +91-80-2235-2828

[email protected]

ಎಲ್ಲಿಗೆ ಹೋಗಬೇಕು

ಗಮ್ಯಸ್ಥಾನಗಳುಅನುಭವಗಳುಆಕರ್ಷಣೆಗಳುಕಾರ್ಯಕ್ರಮಗಳು ಮತ್ತು ರೋಡ್‌ಶೋಗಳು

ನಿಮ್ಮ ಪ್ರವಾಸವನ್ನು ಯೋಜಿಸಿ

ವಿಶೇಷ ಪ್ರವಾಸಗಳುಪ್ರವಾಸ ಸಲಹೆಗಳುವಸತಿ ವ್ಯವಸ್ಥೆಸಾರಿಗೆವೀಸಾ ಮತ್ತು ಪ್ರವಾಸ ದಾಖಲೆಗಳು

ಹೊಸದೇನು

ಇತ್ತೀಚಿನಬ್ಲಾಗ್‌ಗಳುಸ್ಪರ್ಧೆಗಳುಟೆಂಡರ್‌ಗಳುಹೆಚ್ಚು

ವ್ಯಾಪಾರ ಮತ್ತು ಪಾಲುದಾರಿಕೆ

ಸರ್ಕಾರಿ ಸೇವೆಗಳುಹೂಡಿಕೆ ಅವಕಾಶಗಳು

ಕೊನೆಯದಾಗಿ ಪರಿಶೀಲಿಸಿ ನವೀಕರಿಸಿದ ದಿನಾಂಕ: 10 April 2026

ನಿಯಮಗಳು ಮತ್ತು ಷರತ್ತುಗಳುಸೈಟ್ ನಕ್ಷೆಪದೇ ಪದೇ ಕೇಳಲಾಗುವ ಪ್ರಶ್ನೆಗಳುನಿರಾಕರಣೆಕುಕೀ ನೀತಿಗೌಪ್ಯತಾ ನೀತಿಪ್ರತಿಕ್ರಿಯೆನಮ್ಮ ಬಗ್ಗೆ

ಕೊನೆಯದಾಗಿ ಪರಿಶೀಲಿಸಿ ನವೀಕರಿಸಿದ ದಿನಾಂಕ: 10 April 2026

ಹಕ್ಕುಸ್ವಾಮ್ಯ © 2026 ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ

Hero Image

ಕೊಡಗು (ಕೂರ್ಗ್)

ಕಾಫಿ, ಬೆಟ್ಟಗಳು ಮತ್ತು ನಿಸರ್ಗ

ಕರ್ನಾಟಕದ ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಕೊಡಗು, ಇಳಿಜಾರು ಬೆಟ್ಟಗಳು, ದಟ್ಟವಾದ ಕಾಡುಗಳು ಮತ್ತು ಸುವಾಸಿತ ಕಾಫಿ ತೋಟಗಳಿಂದ ಕೂಡಿದ ಸುಂದರ ತಾಣ. ತಂಪಾದ ಹವಾಮಾನ ಮತ್ತು ಹಸಿರು ಸಿರಿಯಿಂದ ಕಂಗೊಳಿಸುವ ಈ ಜಿಲ್ಲೆಯು, ಪ್ರಕೃತಿ ಪ್ರೇಮ ಮತ್ತು ಸಮುದಾಯ ಜೀವನಕ್ಕೆ ಹೆಸರುವಾಸಿಯಾಗಿದೆ.

ಕೊಡಗಿನ ಸೌಂದರ್ಯವು ಅಲ್ಲಿನ ಸಮತೋಲನದಲ್ಲಿದೆ. ಇಲ್ಲಿ ಬೆಳಗಿನ ಜಾವ ಕಾಫಿ ತೋಟಗಳ ಮೇಲೆ ಆವರಿಸುವ ಮಂಜಿನಿಂದ ದಿನ ಆರಂಭವಾದರೆ, ಹಗಲು ಜಲಪಾತಗಳು ಮತ್ತು ಕಾಡಿನ ದಾರಿಗಳ ನಡುವೆ ಕಳೆಯುತ್ತದೆ. ಸಂಜೆ ಬೆಟ್ಟದ ಊರಿನ ಶಾಂತತೆಯಲ್ಲಿ ಮೈಮರೆಯುತ್ತದೆ. ಕೊಡವ ಸಮುದಾಯದ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯಗಳು ಈ ಜಿಲ್ಲೆಯ ಅಸ್ಮಿತೆಯಾಗಿದ್ದು, ಪ್ರವಾಸಿಗರಿಗೆ ಅತ್ಯಂತ ನೈಜವಾದ ಮಲೆನಾಡಿನ ಅನುಭವವನ್ನು ನೀಡುತ್ತದೆ.

ನಿಸರ್ಗ ಮತ್ತು ಪ್ರಾಕೃತಿಕ ಅನುಭವಗಳು

ನದಿಗಳು, ಕಾಡುಗಳು ಮತ್ತು ಎತ್ತರದ ಬೆಟ್ಟಗಳಿಂದ ಕೂಡಿರುವ ಕೊಡಗು, ಕರ್ನಾಟಕದ ಅತ್ಯಂತ ರಮಣೀಯ ಜಿಲ್ಲೆಗಳಲ್ಲಿ ಒಂದಾಗಿದೆ.

  • ಅಬ್ಬೆ ಜಲಪಾತ : ಕಾಫಿ ಮತ್ತು ಸಾಂಬಾರ ಪದಾರ್ಥಗಳ ತೋಟಗಳ ನಡುವೆ ಧುಮ್ಮಿಕ್ಕುವ ಈ ಜಲಪಾತವನ್ನು ಮಳೆಗಾಲದಲ್ಲಿ ಅಥವಾ ನಂತರದ ದಿನಗಳಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ಈ ಸಮಯದಲ್ಲಿ ಸುತ್ತಲೂ ಹಸಿರು ಕಂಗೊಳಿಸುತ್ತಿರುತ್ತದೆ.
  • ರಾಜಾಸೀಟ್ : ಮಡಿಕೇರಿ ನಗರದಲ್ಲಿರುವ ಈ ಸುಂದರವಾದ ಉದ್ಯಾನವನವು ಬೆಟ್ಟಗಳು ಮತ್ತು ಕಣಿವೆಗಳ ವಿಹಂಗಮ ನೋಟವನ್ನು ನೀಡುತ್ತದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸುವುದು ಅವಿಸ್ಮರಣೀಯ ಅನುಭವ.
  • ತಲಕಾವೇರಿ: ಬ್ರಹ್ಮಗಿರಿ ಬೆಟ್ಟಗಳಲ್ಲಿರುವ ಇದು ಪವಿತ್ರ ಕಾವೇರಿ ನದಿ ಉಗಮವಾಗುವ ಸ್ಥಳ. ಸುತ್ತಲೂ ಪ್ರಶಾಂತವಾದ ಬೆಟ್ಟಗಳಿಂದ ಆವೃತವಾಗಿರುವ ಈ ತಾಣವು ಭಾರ್ಮಿಕವಾಗಿಯೂ ಮತ್ತು ನೈಸರ್ಗಿಕವಾಗಿಯೂ ಮಹತ್ವದ್ದಾಗಿದೆ.
  • ದುಬಾರೆ ಆನೆ ಶಿಬಿರ: ಕಾವೇರಿ ನದಿ ತೀರದಲ್ಲಿರುವ ಈ ಶಿಬಿರದಲ್ಲಿ ಆನೆಗಳ ಜೀವನಶೈಲಿ, ಪಾಲನೆ ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಹತ್ತಿರದಿಂದ ತಿಳಿಯಬಹುದು.

ವನ್ಯಜೀವಿ ಮತ್ತು ಅರಣ್ಯ ವಿಹಾರ

ಕೊಡಗಿನ ಬಹುಭಾಗವು ಸಂರಕ್ಷಿತ ಕಾಡುಗಳಿಂದ ಆವೃತವಾಗಿದ್ದು, ವನ್ಯಜೀವಿ ಮತ್ತು ನಿಸರ್ಗ ಪ್ರೇಮಿಗಳಿಗೆ ಇದು ಸ್ವರ್ಗವಾಗಿದೆ.

  • ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಇದು ಜೀವವೈವಿಧ್ಯದ ತಾಣವಾಗಿದೆ. ದಟ್ಟ ಕಾಡಿನ ನಡುವೆ ಸಫಾರಿ ಹೋಗುವ ಮೂಲಕ ಜಿಂಕೆ, ಆನೆ, ಪಕ್ಷಿಗಳು ಮತ್ತು ಅದೃಷ್ಟವಿದ್ದರೆ ಹುಲಿಯನ್ನು ಕಾಣಬಹುದು.
  • ಕಾಲ್ನಡಿಗೆ ಮತ್ತು ಟ್ರೆಕ್ಕಿಂಗ್: ಇಲ್ಲಿನ ಕಾಫಿ ತೋಟಗಳು ಮತ್ತು ಕಾಡಿನ ಅಂಚಿನಲ್ಲಿ ನಡೆಯಲು ಸುಂದರವಾದ ದಾರಿಗಳಿವೆ. ಋತುಮಾನಕ್ಕೆ ಅನುಗುಣವಾಗಿ ಪ್ರವಾಸಿಗರು ಸರಳ ನಡಿಗೆ ಅಥವಾ ಸಾಹಸಮಯ ಟ್ರೆಕ್ಕಿಂಗ್ ಆಯ್ಕೆ ಮಾಡಿಕೊಳ್ಳಬಹುದು.

ಜೀವಂತ ಪರಂಪರೆ: ಕೊಡವ ಸಂಸ್ಕೃತಿ ಮತ್ತು ಸ್ಥಳೀಯ ಜೀವನ

ಸಮುದಾಯ ಮತ್ತು ಸಂಪ್ರದಾಯ ಕೊಡವ ಸಮುದಾಯವು ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಗುರುತು, ಆಚರಣೆಗಳು ಮತ್ತು ಆತ್ಮೀಯ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಸಾಂಪ್ರದಾಯಿಕ ಮನೆಗಳು (ಐನ್ ಮನೆ) ಮತ್ತು ಕೌಟುಂಬಿಕ ಆಚರಣೆಗಳು ಪ್ರಕೃತಿಯೊಂದಿಗೆ ಬೆರೆತ ಅವರ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತವೆ.

ಕಾಫಿ ಮತ್ತು ತೋಟದ ಜೀವನ ಕರ್ನಾಟಕದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಕೊಡಗು. ಇಲ್ಲಿನ ಹೋಂ ಸ್ಟೇಗಳಲ್ಲಿ ತಂಗುವ ಮೂಲಕ ಕಾಫಿ ಕೃಷಿ, ತೋಟದ ಜೀವನ ಮತ್ತು ಮಲೆನಾಡಿನ ನಿಧಾನಗತಿಯ ಬದುಕನ್ನು ಹತ್ತಿರದಿಂದ ಅನುಭವಿಸಬಹುದು.

ಜನಪದ ಮತ್ತು ಕಲೆ ಸ್ಥಳೀಯ ಹಬ್ಬಗಳಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳು, ಜನಪದ ಸಂಗೀತ ಮತ್ತು ತಲೆಮಾರುಗಳಿಂದ ನಡೆದುಕೊಂಡು ಬಂದ ಆಚರಣೆಗಳನ್ನು ಕಣ್ತುಂಬಿಕೊಳ್ಳಬಹುದು.

ಹಬ್ಬಗಳು ಮತ್ತು ಉತ್ಸವಗಳು

  • ಕಾವೇರಿ ಸಂಕ್ರಮಣ :

    ಸಮಯ: ಅಕ್ಟೋಬರ್.

    ಸ್ಥಳೀಯ ಹಬ್ಬಗಳು: ವರ್ಷವಿಡೀ ನಡೆಯುವ ಕೈಲ್ ಪೋದ್ ಮತ್ತು ಹುತ್ತರಿ ಹಬ್ಬಗಳು ಸಮುದಾಯದ ಒಗ್ಗಟ್ಟು, ಕೃಷಿ ಆಚರಣೆಗಳು ಮತ್ತು ಸಂಭ್ರಮವನ್ನು ಎತ್ತಿ ತೋರಿಸುತ್ತವೆ.

ಆಹಾರ ವೈವಿಧ್ಯ

  • ಪಂದಿ ಕರಿ : ಸ್ಥಳೀಯ ಸಾಂಬಾರ ಪದಾರ್ಥಗಳನ್ನು ಬಳಸಿ, ನಿಧಾನವಾಗಿ ಬೇಯಿಸಿ ತಯಾರಿಸುವ ಈ ವಿಶಿಷ್ಟ ಮಾಂಸದ ಅಡುಗೆ ಕೊಡಗಿನ ವಿಶೇಷತೆಯಾಗಿದೆ.
  • ಬಿದಿರು ಕಳಲೆ ಖಾದ್ಯ: ಕಾಡಿನ ಉತ್ಪನ್ನವಾದ ಎಳೆ ಬಿದಿರು ಅಥವಾ ಕಳಲೆಯಿಂದ ತಯಾರಿಸುವ ಖಾದ್ಯಗಳು ಇಲ್ಲಿನ ಋತುಮಾನದ ರುಚಿಯನ್ನು ಪ್ರತಿನಿಧಿಸುತ್ತವೆ.
  • ಫಿಲ್ಟರ್ ಕಾಫಿ: ತೋಟದ ತಾಜಾ ಕಾಫಿ ಬೀಜಗಳಿಂದ ತಯಾರಿಸಿದ ಘಮಘಮಿಸುವ ಸ್ಟ್ರಾಂಗ್ ಕಾಫಿ ಇಲ್ಲಿನ ಜನರ ದಿನನಿತ್ಯದ ಸಂಗಾತಿ.

ಪ್ರವಾಸಿ ಮಾಹಿತಿ

ಸಂಪರ್ಕ

  • ರಸ್ತೆ ಮೂಲಕ: ಕರ್ನಾಟಕದ ಪ್ರಮುಖ ನಗರಗಳಿಂದ ಕೊಡಗಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಕಾಡು ಮತ್ತು ಬೆಟ್ಟಗಳ ನಡುವಿನ ಪ್ರಯಾಣವು ಆಹ್ಲಾದಕರವಾಗಿರುತ್ತದೆ.
  • ರೈಲು ಮೂಲಕ: ಹತ್ತಿರದ ಪ್ರಮುಖ ರೈಲು ನಿಲ್ದಾಣ ಮೈಸೂರು. ಅಲ್ಲಿಂದ ರಸ್ತೆ ಮೂಲಕ ಕೊಡಗನ್ನು ತಲುಪಬಹುದು.
  • ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣಗಳು ಮಂಗಳೂರು, ಕಣ್ಣೂರು ಅಥವಾ ಮೈಸೂರಿನಲ್ಲಿದ್ದು, ಅಲ್ಲಿಂದ ರಸ್ತೆ ಮಾರ್ಗದಲ್ಲಿ ಬರಬಹುದು.

ಭೇಟಿ ನೀಡಲು ಸೂಕ್ತ ಸಮಯ

ಸೆಪ್ಟೆಂಬರ್ ನಿಂದ ಜೂನ್ ವರೆಗಿನ ಅವಧಿಯು ಪ್ರವಾಸಕ್ಕೆ, ತೋಟಗಳಲ್ಲಿ ತಂಗಲು ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಮಳೆಗಾಲದಲ್ಲಿ ಹಸಿರು ಕಂಗೊಳಿಸುತ್ತದೆಯಾದರೂ, ಟ್ರೆಕ್ಕಿಂಗ್ ಮತ್ತು ವನ್ಯಜೀವಿ ವೀಕ್ಷಣೆಗೆ ಅಡಚಣೆಯಾಗಬಹುದು.

ಪ್ರವಾಸದ ಯೋಜನೆ

  • ದಿನ 1: ಮಡಿಕೇರಿ ನಗರ, ರಾಜಾಸೀಟ್, ಅಬ್ಬೆ ಜಲಪಾತ ಮತ್ತು ಸ್ಥಳೀಯ ಮಾರುಕಟ್ಟೆ ಭೇಟಿ.
  • ದಿನ 2: ತಲಕಾವೇರಿ, ದುಬಾರೆ ಆನೆ ಶಿಬಿರ ಮತ್ತು ಕಾಫಿ ತೋಟದ ಅನುಭವ.
  • ದಿನ 3: ವನ್ಯಜೀವಿ ಸಫಾರಿ ಅಥವಾ ಕಾಡಿನಲ್ಲಿ ನಡಿಗೆ ಮತ್ತು ಹೋಂ ಸ್ಟೇಯಲ್ಲಿ ವಿಶ್ರಾಂತಿ.

ಹತ್ತಿರದ ಜಿಲ್ಲೆಗಳು ಮತ್ತು ಪ್ರಮುಖ ಪಟ್ಟಣಗಳು

ಕರ್ನಾಟಕದ ನೈಋತ್ಯ ಭಾಗದಲ್ಲಿರುವ ಕೊಡಗು, ಸುತ್ತಮುತ್ತಲಿನ ಪಾರಂಪರಿಕ ಮತ್ತು ಪ್ರಾಕೃತಿಕ ತಾಣಗಳನ್ನು ಅನ್ವೇಷಿಸಲು ಉತ್ತಮ ಕೇಂದ್ರವಾಗಿದೆ.

  • ಮೈಸೂರು (120 ಕಿ.ಮೀ ಪೂರ್ವಕ್ಕೆ): ಅರಮನೆಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ಹೆಸರುವಾಸಿಯಾದ ಮೈಸೂರು, ಕೊಡಗಿನ ನಿಸರ್ಗದ ಅನುಭವಕ್ಕೆ ಇತಿಹಾಸದ ಸ್ಪರ್ಶ ನೀಡುತ್ತದೆ.
  • ಹಾಸನ (125 ಕಿ.ಮೀ ಈಶಾನ್ಯಕ್ಕೆ): ಬೇಲೂರು-ಹಳೆಬೀಡು ದೇವಾಲಯಗಳಿಗೆ ಪ್ರಸಿದ್ಧವಾಗಿರುವ ಹಾಸನವು ವಾಸ್ತುಶಿಲ್ಪದ ತವರೂರಾಗಿದೆ.
  • ಚಿಕ್ಕಮಗಳೂರು (150 ಕಿ.ಮೀ ಉತ್ತರಕ್ಕೆ): ಕಾಫಿ ತೋಟಗಳು ಮತ್ತು ಎತ್ತರದ ಗಿರಿಧಾಮಗಳಿಗೆ ಹೆಸರುವಾಸಿಯಾದ ಮತ್ತೊಂದು ಮಲೆನಾಡು ಜಿಲ್ಲೆ.
  • ಮಂಡ್ಯ (110 ಕಿ.ಮೀ ಪೂರ್ವಕ್ಕೆ): ಕಾವೇರಿ ನದಿ ಮತ್ತು ಕೃಷಿ ಆಧಾರಿತ ಭೂದೃಶ್ಯಗಳನ್ನು ಹೊಂದಿರುವ ಜಿಲ್ಲೆ.
  • ಉಡುಪಿ (230 ಕಿ.ಮೀ ವಾಯುವ್ಯಕ್ಕೆ): ದೇವಾಲಯಗಳು, ಕಡಲತೀರಗಳು ಮತ್ತು ಸಂಸ್ಕೃತಿಗೆ ಹೆಸರಾದ ಕರಾವಳಿ ಜಿಲ್ಲೆ.

ಇಲ್ಲಿ ಕಾಡುಗಳು ಉಸಿರಾಡುತ್ತವೆ, ನೆರಳಿನಲ್ಲಿ ಕಾಫಿ ಅರಳುತ್ತದೆ ಮತ್ತು ಸಂಪ್ರದಾಯಗಳು ಮೌನವಾಗಿ ಹರಿಯುತ್ತವೆ. ಕೊಡಗು ನಿಮಗೆ ಕರ್ನಾಟಕದ ಬೆಟ್ಟಗಳ ನಡುವೆ ಹೊಸ ಚೈತನ್ಯ ಮತ್ತು ಬೇರುಗಳ ನಂಟನ್ನು ನೀಡುತ್ತದೆ. ಇಲ್ಲಿನ ದೃಶ್ಯಗಳಿಗಾಗಿ ಬನ್ನಿ, ಶಾಂತಿಗಾಗಿ ತಂಗಿ ಮತ್ತು ಮಂಜಿನ ನೆನಪುಗಳೊಂದಿಗೆ ಮರಳಿ.

ಭೇಟಿ ನೀಡಲು ಉತ್ತಮ ಸಮಯ
ಸೆಪ್ಟೆಂಬರ್‌ - ಜೂನ್
ಇದರಿಗಾಗಿ ಪ್ರಸಿದ್ಧ
ಕಾಫಿ ತೋಟಗಳು, ನಿತ್ಯಹಸಿರು ಕಾಡು, ರಮಣೀಯ ತಾಣಗಳು

ಆಕರ್ಷಣೆಗಳು

ಇರ್ಪು ಜಲಪಾತ

ಕೊಡಗಿನ ಬ್ರಹ್ಮಗಿರಿ ಬೆಟ್ಟಗಳ ಆಳದಲ್ಲಿ ನೆಲೆಸಿರುವ ಇರುಪು ಜಲಪಾತ — ಲಕ್ಷ್ಮಣ ತೀರ್ಥ ಜಲಪಾತ ಎಂದೂ ಕರೆಯಲ್ಪಡುತ್ತದೆ — ...

ಅಬ್ಬೆ ಜಲಪಾತ

ಅಬ್ಬೆ ಜಲಪಾತ (ಅಬ್ಬಿ ಜಲಪಾತ ಎಂದೂ ಕರೆಯಲ್ಪಡುತ್ತದೆ) ಕೊಡಗು ಜಿಲ್ಲೆಯ ಒಂದು ಜನಪ್ರಿಯ ಜಲಪಾತವಾಗಿದೆ. ಕಾವೇರಿ ನದಿಯು ಸ...

ಓಂಕಾರೇಶ್ವರ ದೇವಾಲಯ

ಮಡಿಕೇರಿ ಕೋಟೆಯಿಂದ ಕೂಗಳತೆ ದೂರದಲ್ಲಿರುವ ಓಂಕಾರೇಶ್ವರ ದೇವಾಲಯವನ್ನು 1820 ರಲ್ಲಿ ನಿರ್ಮಿಸಲಾಗಿದ್ದು, ಕೆಂಪು ಹೆಂಚಿನ ...

ಇರ್ಪು ಜಲಪಾತ

ಕೊಡಗಿನ ಬ್ರಹ್ಮಗಿರಿ ಬೆಟ್ಟಗಳ ಆಳದಲ್ಲಿ ನೆಲೆಸಿರುವ ಇರುಪು ಜಲಪಾತ — ಲಕ್ಷ್ಮಣ ತೀರ್ಥ ಜಲಪಾತ ಎಂದೂ ಕರೆಯಲ್ಪಡುತ್ತದೆ — ...

ಅಬ್ಬೆ ಜಲಪಾತ

ಅಬ್ಬೆ ಜಲಪಾತ (ಅಬ್ಬಿ ಜಲಪಾತ ಎಂದೂ ಕರೆಯಲ್ಪಡುತ್ತದೆ) ಕೊಡಗು ಜಿಲ್ಲೆಯ ಒಂದು ಜನಪ್ರಿಯ ಜಲಪಾತವಾಗಿದೆ. ಕಾವೇರಿ ನದಿಯು ಸ...

ಓಂಕಾರೇಶ್ವರ ದೇವಾಲಯ

ಮಡಿಕೇರಿ ಕೋಟೆಯಿಂದ ಕೂಗಳತೆ ದೂರದಲ್ಲಿರುವ ಓಂಕಾರೇಶ್ವರ ದೇವಾಲಯವನ್ನು 1820 ರಲ್ಲಿ ನಿರ್ಮಿಸಲಾಗಿದ್ದು, ಕೆಂಪು ಹೆಂಚಿನ ...

ಭೇಟಿ ನೀಡಲು ಉಪಯುಕ್ತ ಸೂಚನೆ ಹಾಗೂ ಸಲಹೆಗಳು

ಭೇಟಿ ನೀಡಲು ಉತ್ತಮ ಸಮಯ

  • ಸೆಪ್ಟೆಂಬರ್‌ – ಜೂನ್
  • ವರ್ಷವಿಡೀ ಹವಾಮಾನವು ಹಿತಕರವಾಗಿರುತ್ತದೆ
ಇನ್ನಷ್ಟು ಓದಿ →

ಸಂಚಾರ ಹೇಗೆ?

  • ಸ್ವಯಂ ಚಾಲನೆ
  • ಕ್ಯಾಬ್‌ಗಳು
ಇನ್ನಷ್ಟು ಓದಿ →

ಅಗತ್ಯ ವಸ್ತುಗಳು

  • ಹಗುರ ಮಳೆಗಾಲದ ಉಡುಪು
  • ಟ್ರೆಕ್ಕಿಂಗ್ ಬೂಟುಗಳು
ಇನ್ನಷ್ಟು ಓದಿ →

ಮುಂಬರುವ ಕಾರ್ಯಕ್ರಮಗಳು

23Oct
–
25Oct
ಕಿತ್ತೂರು ಉತ್ಸವ
ಕಾರ್ಯಕ್ರಮ

ಕಿತ್ತೂರು ಉತ್ಸವ

ಬೆಳಗಾವಿ ಜಿಲ್ಲೆಯಲ್ಲಿ ನಡೆಯುವ ಕಿತ್ತೂರು ಉತ್ಸವವು ವರ್ಣರಂಜಿತ ರಾಜ್ಯಮಟ್ಟದ ಹಬ್ಬವಾಗಿದೆ. ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಕರೆಯಲ್ಪಡುವ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯವನ್ನು ಗೌರವಿಸಲು ಇದನ್ನು ಆಚರಿಸಲಾಗುತ್ತದೆ. ಐತಿಹಾಸಿಕ ಕಿತ್ತೂರು ಕೋಟೆಯ ಹಿನ್ನೆಲೆಯಲ್ಲಿ ನಡೆಯುವ ಈ ಉತ್ಸವವು ದೇಶಭಕ್ತಿಯ ಸ್ಮರಣೆಯ ಜೊತೆಗೆ ವರ್ಣರಂಜಿತ ಜಾನಪದ ಸಂಸ್ಕೃತಿ, ಸಂಗೀತ ಕಚೇರಿಗಳು, ವಸ್ತುಪ್ರದರ್ಶನ ಮತ್ತು ಸ್ಥಳೀಯ ತಿನಿಸುಗಳ ಸಮ್ಮಿಲನವಾಗಿದೆ. ನಿಮಗೆ ತಿಳಿದಿದೆಯೇ? ಉತ್ಸವದ ಪ್ರಮುಖ ಆಕರ್ಷಣೆಗಳು ದಿನಾಂಕ ಮತ್ತು ಸಮಯ ಕಿತ್ತೂರು ಉತ್ಸವವನ್ನು ಸಾಮಾನ್ಯವಾಗಿ 1824ರ […]

21Dec
–
31Jan
ಕರಾವಳಿ ಉತ್ಸವ 2025 – ದಕ್ಷಿಣ ಕನ್ನಡ
ಕಾರ್ಯಕ್ರಮ

ಕರಾವಳಿ ಉತ್ಸವ 2025 – ದಕ್ಷಿಣ ಕನ್ನಡ

ದಕ್ಷಿಣ ಕನ್ನಡ – ಮಂಗಳೂರು

6Sept
–
7Sept
ಭರಚುಕ್ಕಿ ಜಲಪಾತೋತ್ಸವ
ಕಾರ್ಯಕ್ರಮ

ಭರಚುಕ್ಕಿ ಜಲಪಾತೋತ್ಸವ

ಚಾಮರಾಜನಗರ

14Sept
–
15Sept
ಗಗನಚುಕ್ಕಿ ಜಲಪಾತೋತ್ಸವ
ಕಾರ್ಯಕ್ರಮ

ಗಗನಚುಕ್ಕಿ ಜಲಪಾತೋತ್ಸವ

ಮಂಡ್ಯ

23Sept
–
2Oct
ಮೈಸೂರು ದಸರಾ ಹಬ್ಬ – ನಮ್ಮ ಕರ್ನಾಟಕದ ನಾಡಹಬ್ಬ
ಕಾರ್ಯಕ್ರಮ

ಮೈಸೂರು ದಸರಾ ಹಬ್ಬ – ನಮ್ಮ ಕರ್ನಾಟಕದ ನಾಡಹಬ್ಬ

ಮೈಸೂರು

17Oct
ಕಾವೇರಿ ಸಂಕ್ರಮಣ
ಕಾರ್ಯಕ್ರಮ

ಕಾವೇರಿ ಸಂಕ್ರಮಣ

ಕೊಡಗು

1Nov
ಕನ್ನಡ ರಾಜ್ಯೋತ್ಸವ
ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ

ಕರ್ನಾಟಕ

1Jan
–
31Jan
ಉಡುಪಿ ಪರ್ಯಾಯ ಉತ್ಸವ
ಕಾರ್ಯಕ್ರಮ

ಉಡುಪಿ ಪರ್ಯಾಯ ಉತ್ಸವ

ಉಡುಪಿ

1Jan
–
31Jan
ಪಟ್ಟದಕಲ್ಲು ನೃತ್ಯೋತ್ಸವ
ಕಾರ್ಯಕ್ರಮ

ಪಟ್ಟದಕಲ್ಲು ನೃತ್ಯೋತ್ಸವ

ಬಾಗಲಕೋಟೆ

1Feb
–
31Mar
ಲಕ್ಕುಂಡಿ ಉತ್ಸವ
ಕಾರ್ಯಕ್ರಮ

ಲಕ್ಕುಂಡಿ ಉತ್ಸವ

ಗದಗ

1Feb
–
28Feb
ಚಾಲುಕ್ಯ ಉತ್ಸವ
ಕಾರ್ಯಕ್ರಮ

ಚಾಲುಕ್ಯ ಉತ್ಸವ

ಬಾಗಲಕೋಟೆ

13Feb
–
15Feb
ಹಂಪಿ ಉತ್ಸವ 2026
ಕಾರ್ಯಕ್ರಮ

ಹಂಪಿ ಉತ್ಸವ 2026

ವಿಜಯನಗರ

1Jul
–
31Jul
ಕನಕಗಿರಿ ಉತ್ಸವ
ಕಾರ್ಯಕ್ರಮ

ಕನಕಗಿರಿ ಉತ್ಸವ

ಕೊಪ್ಪಳ

ಕ್ಯಾಲೆಂಡರ್ ಆಗಿ ನೋಡು
ಕ್ಯಾಲೆಂಡರ್ ಆಗಿ ನೋಡು

ಸ್ಥಳೀಯ ಪ್ರವಾಸಿ ತಾಣಗಳು

ಮೈಸೂರು

ಚಿಕ್ಕಮಗಳೂರು

ಶೃಂಗೇರಿ

ಎಲ್ಲವನ್ನೂ ವೀಕ್ಷಿಸಿ
ಎಲ್ಲವನ್ನೂ ವೀಕ್ಷಿಸಿ